ಅಗ್ರಿಪ್ರೆನ್ಯೂರ್‌ಶಿಪ್ ಓರಿಯಂಟೇಶನ್ ಪ್ರೋಗ್ರಾಂ ಮತ್ತು ಸ್ಟಾರ್ಟ್‌ಅಪ್ ಅಗ್ರಿ-ಬಿಸಿನೆಸ್ ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ೩೦ ನೇ ನವೆಂಬರ್ ೨೦೨೧, ಮಧ್ಯಾಹ್ನ ೨ ಗಂಟೆಯವರೆಗೆ ವಿಸ್ತರಿಸಲಾಗಿದೆ. ಮುಂಬರುವ ಕಾರ್ಯಕ್ರಮಗಳ ಪುಟದಿಂದ ದಯವಿಟ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ನವೋದ್ಯಮ ಪೋಷಣ ಧನಸಹಾಯ ಬೆಂಬಲ


"ಕೃಷಿಕ್" ನವೋದ್ಯಮ ಪೋಷಣ ಕೇಂದ್ರವು ನವೋದ್ಯಮಗಳಿಗೆ ಹೂಡಿಕೆದಾರರ, ತಂತ್ರಜ್ಞಾನಿಗಳ ಹಾಗೂ ಸಲಹೆಗಾರರ ಮುಖಾಂತರ ಉನ್ನತಮಟ್ಟದ ಮಾರ್ಗದರ್ಶನವನ್ನು ಒದಗಿಸುತ್ತದೆ.


ನವೋದ್ಯಮ ಕಾರ್ಯಕ್ರಮಗಳಲ್ಲಿ ಆಯ್ಕೆಗೊಂಡ ನವೋದ್ಯಮ ತಂಡಗಳು ನುರಿತ ಮಾರ್ಗದರ್ಶಕರ ಸಲಹೆ ಪಡೆದುಕೊಳ್ಳುತ್ತಾರೆ. ಮಾರ್ಗದರ್ಶಕರೊಂದಿಗೆ ದಿನನಿತ್ಯ ಕಾರ್ಯನಿರ್ವಹಿಸಿ, ಅವರ ಅನುಭವಗಳನ್ನು ಕೇಳಿಸಿಕೊಂಡು ಹಾಗೂ ಅವರ ಅಮೂಲ್ಯ ಒಳನೋಟಗಳು ಮತ್ತು ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.