ಅಗ್ರಿಪ್ರೆನ್ಯೂರ್‌ಶಿಪ್ ಓರಿಯಂಟೇಶನ್ ಪ್ರೋಗ್ರಾಂ ಮತ್ತು ಸ್ಟಾರ್ಟ್‌ಅಪ್ ಅಗ್ರಿ-ಬಿಸಿನೆಸ್ ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ೩೦ ನೇ ನವೆಂಬರ್ ೨೦೨೧, ಮಧ್ಯಾಹ್ನ ೨ ಗಂಟೆಯವರೆಗೆ ವಿಸ್ತರಿಸಲಾಗಿದೆ. ಮುಂಬರುವ ಕಾರ್ಯಕ್ರಮಗಳ ಪುಟದಿಂದ ದಯವಿಟ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ಅನ್ವೇಷಣ ನವೋದ್ಯಮ ಪೋಷಣ

ವಿಷಯಗಳು

ಕೃಷಿ ನವೋದ್ಯಮ ಪೋಷಣ ಕಾರ್ಯಕ್ರಮದಡಿಯಲ್ಲಿ ಕೃಷಿ ಮತ್ತು ಕೃಷಿ ಪೂರಕವಾದ ನವೋದ್ಯಮಗಳಿಗೆ ಕನಿಷ್ಠ ಕಾರ್ಯಸಾಧ್ಯ (Minimum Viable Product) ನಾವೀನ್ಯಪೂರ್ಣ ಪರಿಹಾರ/ಪ್ರಕ್ರಿಯೆ/ಉತ್ಪನ್ನ/ಉದ್ಯಮ ಮಾದರಿಯನ್ನು ವಾಣಿಜ್ಯ್ಕರಿಸಲು, ಮೇಲ್ಮಟ್ಟಕ್ಕೆ ಹೆಚ್ಚಿಸಲು ಮತ್ತು ತ್ವರಿತವಾಗಿ ಯಶಸ್ವಿಗೊಳಿಸಲು ಸಹಕರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಪರಿಹಾರ/ ಪ್ರಕ್ರಿಯೆ / ಉತ್ಪನ್ನ / ಉದ್ಯಮ ಮಾದರಿ ಇತ್ಯಾದಿಗಳನ್ನು ಮೇಲ್ದರ್ಜೆಗೆರಿಸಲು ಬೇಕಾಗುವ ಬಂಡವಾಳವನ್ನು ವಾಣಿಜ್ಯ ಬ್ಯಾಂಕ್ / ಹಣಕಾಸು ಸಂಸ್ಥೆ /ಬಂಡವಾಳ ಶಾಹಿಗಳಿಂದ ಆಕರ್ಷಿಸಲು ಅನುಕೂಲ ಮಾಡಿಕೊಡಲಾಗುವುದು. ಎರಡು ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಕಾರ್ಯಸಾಧುವಾದ ವಿವಿಧ ಕೃಷಿ ಉದ್ಯಮ ಆರಂಭಿಸುವ ಯೋಚನಾ ಲಹರಿ/ತಂತ್ರಜ್ಞಾನ/ಕೃಷಿ ಸೇವೆ ಇತ್ಯಾದಿಗಳನ್ನು ವಿಸ್ತರಿಸಲು ಮಾರ್ಗದರ್ಶನ ನೀಡಲಾಗುವುದು. ಸದರಿ ನವೋದ್ಯಮಿಗಳು ರೂ. ೨೫.೦೦ ಲಕ್ಷದವರೆಗಿನ ಧನಸಹಾಯಕ್ಕೆ ಅರ್ಹರಾಗಿರುತ್ತಾರೆ. ಅರ್ಜಿದಾರರ ನೈಜ ಅವಶ್ಯಕತೆಗಳಿಗೆ ಉದ್ಯಮ ಯೋಜನೆಯ ಮೌಲ್ಯಮಾಪನಗನುಗುಣವಾಗಿ ಆಯ್ಕೆ ಸಮಿತಿಯಿಂದ ನಿರ್ಧರಿಸಲಾಗುವುದು. ಈ ಸಂಬಂಧ ಆಯ್ಕೆ ಸಮಿತಿಯ ನಿರ್ಣಯವು ಅಂತಿಮವಾಗಿರುತ್ತದೆ.ಉದ್ದೇಶಗಳು

ಅ. ಅರ್ಹ ನವೋದ್ಯಮಿಗಳಿಗೆ ಸಮಯೋಚಿತ ಧನ ಸಹಾಯ ಒದಗಿಸುವುದು.


ಆ. ಕನಿಷ್ಠ ಕಾರ್ಯಸಾಧ್ಯವಾದ ಉತ್ಪನ್ನ / ಸೇವೆಗಳನ್ನು ಮಾರಾಟ ಹಂತಕ್ಕೆ ಪರಿವರ್ತಿಸಲು / ಮೇಲ್ದರ್ಜೆಗೆರಿಸಲು ಸಹಕಾರ ನೀಡುವುದು.


ಇ. ನಾವೀನ್ಯಪೂರ್ಣ ಪರಿಹಾರ / ಪ್ರಕ್ರಿಯೆ / ಉತ್ಪನ್ನ / ಉದ್ಯಮ ಮಾದರಿಯ ಕನಿಷ್ಠ ಕಾರ್ಯಸಾಧ್ಯವಾದ ಉತ್ಪನ್ನ / ಸೇವೆಗಳನ್ನು ತ್ವರಿತವಾಗಿ ಪರೀಕ್ಷಿಸಲು / ಮಾರ್ಪಡಿಸಲು ಸೂಕ್ತ ವೇದಿಕೆ ಒದಗಿಸುವುದು.ಅರ್ಹತಾ ಮಾನದಂಡಗಳು

ಅ. ಅರ್ಜಿದಾರರು ಕಾನೂನುರಿತ್ಯ ನೊಂದಾಯಿತ ಭಾರತ ದೇಶದ ಘಟಕವಾಗಿರಬೇಕು.


ಆ. ಅರ್ಜಿದಾರರು ಭಾರತೀಯ ಮೂಲದ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ (DIPP) ಅಧಿಸೂಚನೆಯನ್ವಯ ನವೋದ್ಯಮಿಗಳಾಗಿರಬೇಕು (Startup). ಬಹುರಾಷ್ಟ್ರೀಯ ಸಂಸ್ಥೆಗಳು / ಅಂಗ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸದರಿ ಕಾರ್ಯಕ್ರಮ ಅನ್ವಯವಾಗುವುದಿಲ್ಲ.


ಇ. ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಿಂದ ಧನಸಹಾಯ ಪಡೆದ ನವೋದ್ಯಮಗಳು ಸದರಿ ಕಾರ್ಯಕ್ರಮಕ್ಕೆ ಅರ್ಹರಿರುವುದಿಲ್ಲ.ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ

ಅ. ಕೃಷಿಕ–ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃವಿವಿ., ಧಾರವಾಡದಿಂದ ಆಯ್ಕೆ ಮಾಡಲಾಗುವುದು.


ಆ. ಎರಡು ತಿಂಗಳ ಸನಿವಾಸ ಕಾರ್ಯಕ್ರಮದ ತರುವಾಯ ನವೋದ್ಯಮಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಧನಸಹಾಯಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಇವರಿಗೆ ಶಿಫಾರಸ್ಸು ಮಾಡಲಾಗುವುದು.


ಇ. ಕೃಷಿ ನವೋದ್ಯಮದ ಕಾರ್ಯ ಸಾಧ್ಯವಾದ ನವೀನ ಪರಿಕಲ್ಪನೆ ಹೊಂದಿರುವ ೨೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾರ್ಥಮಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಯ ಮುಂದೆ ಮಂಡಿಸಲು ಸ್ವಂತ ಖರ್ಚಿನ ಮೇಲೆ ಹಾಜರಾಗಬೇಕಾಗುವುದು.ಅನುದಾನ ಬಿಡುಗಡೆ

ಸದರಿ ಕಾರ್ಯಕ್ರಮದಲ್ಲಿ ಖಾಸಗಿ ಭಾಗಿಧಾರರ ಪಾಲುಗಾರಿಕೆಯನ್ನು ಖಚಿತ ಪಡಿಸಲು ಯೋಜನಾ ವೆಚ್ಚದ ಶೇ. ೧೫ ರಷ್ಟನ್ನು ನವೋದ್ಯಮಿಗಳು ಭರಿಸಬೇಕು. ಇನ್ನುಳಿದ ಶೇ. ೮೫ ರಷ್ಟು ಯೋಜನಾ ವೆಚ್ಚವನ್ನು (ಗರಿಷ್ಠ ರೂ. ೨೫ ಲಕ್ಷ ಮಿತಿಗೆ ಒಳಪಟ್ಟು) ರಾಷ್ಟೀಯ ಕೃಷಿ ವಿಕಾಸ ಯೋಜನೆಯ ರಫ್ತಾರ ಘಟಕದ ಮೂಲಕ ೩ ಕಂತುಗಳಲ್ಲಿ ಒದಗಿಸಲಾಗುವುದು.ವಿಸ್ತ್ರತ ಚಟುವಟಿಕೆಗಳು

ಕಾರ್ಯಕ್ರಮ ಅನುಷ್ಠಾನಕ್ಕಾಗಿ ವಿವಿಧ ಬಾಬತ್ತುಗಳಿಗಾಗಿ ಬಳಸಬಹುದಾದ ಚಟುವಟಿಕೆಗಳ ವೆಚ್ಚದ ವಿವರವನ್ನು ಈ ಕೆಳಗೆ ನೀಡಲಾಗಿದೆ.


ಅ. ಉತ್ಪನ್ನಗಳ ಪರಿಷ್ಕರಣೆ / ಪರೀಕ್ಷೆ ಮತ್ತು ಪ್ರಾಯೋಗಿಕ ವ್ಯಾಪಾರ ಹಾಗೂ ಮಾರುಕಟ್ಟೆ ಬಿಡುಗಡೆ.


ಆ. ಮಾಹಿತಿ / ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂಕಿಸಂಖ್ಯೆ ಮಾಹಿತಿ / ದತ್ತಾಂಶ ಉತ್ಪಾದನೆ / ಸಂಗ್ರಹಣೆ ಇವೇ ಮೊದಲಾದ ವಿಷಯಗಳಿಗೆ ಮಾಡಿದ ವೆಚ್ಚ.


ಇ. ಭೌದ್ಧಿಕ ಆಸ್ತಿ ಶುಲ್ಕ / ಒಂದುಬಾರಿ ಪಾವತಿಸಬಹುದಾದ ಪರವಾನಗಿ ಶುಲ್ಕ.


ಈ. ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾಗುವ ಮಾನವ ಸಂಪನ್ಮೂಲ.


ಉ. ದೈನಿಕ ಕಾರ್ಯಗಳಿಗೆ ಬೇಕಾಗುವ ವಿದ್ಯುತ್ ವೆಚ್ಚ, ಪೋಷಣ ಕೇಂದ್ರದ ಶುಲ್ಕ ಇತ್ಯಾದಿ.


ಊ. ಕೃಷಿಕ ಪೋಷಣ ಕೇಂದ್ರದ ಶಿಫಾರಸ್ಸಿನನ್ವಯ ಅಗತ್ಯವೆಂದು ಪರಿಗಣಿಸಲಾದ ವೆಚ್ಚಗಳು.ಗ್ಯಾಲರಿ

1 / 15

ಹೈ -ಟೆಕ್ ತೋಟಗಾರಿಕೆ ಫಾರ್ಮ್, ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ತರಬೇತುದಾರರು

2 / 15

ಸಿಮ್ ಗ್ರೋ ಟೆಕ್ನಾಲಜೀಸ್ , ದೇಶಪಾಂಡೆ ಸ್ಟಾರ್ಟ್ ಅಪ್ಸ್, ಹುಬ್ಬಳ್ಳಿ

3 / 15

ಹಿಳ್ಳಿಕೇರಿ ವಿದ್ಯಾಲಯ, ಹಾವೇರಿ

4 / 15

ಗೋಗಟೆ ತಂತ್ರಜ್ಞಾನ ಸಂಸ್ಥೆ ಬೆಳಗಾವಿಗೆ ಭೇಟಿ

5 / 15

ಅತ್ತುತ್ಯಮ ನವೋದ್ಯಮ ಪ್ರಶಸ್ತಿಯನ್ನು ಸ್ವೇತಾಂಗ್ ಶರ್ಮಾ (ಆಕ್ಟಿವ್ಎಕ್ಸ್ ಪೆಟ್ ಕೇರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್) ಇವರಿಗೆ ನೀಡಲಾಯಿತು

6 / 15

ಬೆಂಗಳೂರು ಟೆಕ್-ಸಮ್ಮಿಟ್

7 / 15

ಕೃಷಿ ವಿಜ್ಞಾನ ಕೇಂದ್ರ, ಧಾರವಾಡಕ್ಕೆ ಭೇಟಿ

8 / 15

ದೇಶಪಾಂಡೆ ಸ್ಟಾರ್ಟ್ ಅಪ್ಸ್, ಹುಬ್ಬಳ್ಳಿಯಲ್ಲಿ ಸಂವಾದಾತ್ಮಕ ಕಾರ್ಯಚಟುವಟಿಕೆಯಲ್ಲಿ ತರಬೇತುದಾರರು

9 / 15

ಶರಣಬಸವ ಮಹಾವಿದ್ಯಾಲಯ, ಕಲಬುರಗಿ

10 / 15

ಡಾ. ಹರ್ಷ ಕಿಕ್ಕೇರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಹೋಲೋಸುಟ್ ಪ್ರೈವೇಟ್ ಲಿಮಿಟೆಡ್ ಹಾಗೂ " ಕೃಷಿಕ್ " ತಂಡದೊಂದಿಗೆ ತರಬೇತುದಾರರು

11 / 15

"ಕಿಸಾನ" ಭಾರತದ ಅತಿ ದೊಡ್ಡ ಕೃಷಿ ಮೇಳ, ಪುಣೆ

12 / 15

" ಭಾರತದಲ್ಲಿ ಕೃಷಿ ನವೋದ್ಯಮದ ಮುನ್ನೋಟ ಹಾಗೂ ನಿರೀಕ್ಷೆಗಳು " ಈ ವಿಷಯದ ಕುರಿತು ವೆಬಿನಾರ್

13 / 15

ಶ್ರೀ. ಸಿ. ಎಮ್. ಪಾಟೀಲ್ ಅವರಿಂದ "ಕೃಷಿ ನವೋದ್ಯಮ - ಮುಂದಿನ ದಾರಿ" ವಿಷಯದ ಕುರಿತು ಉಪನ್ಯಾಸ

14 / 15

ಕೃಷಿಕ್- ನವೋದ್ಯಮದ ಪೋಷಣಾ ಕೇಂದ್ರದ ಐದನೇ ಹಂತದ ಮೊದಲನೇ ಸಿ. ಐ. ಸಿ ಸಭೆ

15 / 15