ಅಗ್ರಿಪ್ರೆನ್ಯೂರ್‌ಶಿಪ್ ಓರಿಯಂಟೇಶನ್ ಪ್ರೋಗ್ರಾಂ ಮತ್ತು ಸ್ಟಾರ್ಟ್‌ಅಪ್ ಅಗ್ರಿ-ಬಿಸಿನೆಸ್ ಇನ್‌ಕ್ಯುಬೇಶನ್ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ೩೦ ನೇ ನವೆಂಬರ್ ೨೦೨೧, ಮಧ್ಯಾಹ್ನ ೨ ಗಂಟೆಯವರೆಗೆ ವಿಸ್ತರಿಸಲಾಗಿದೆ. ಮುಂಬರುವ ಕಾರ್ಯಕ್ರಮಗಳ ಪುಟದಿಂದ ದಯವಿಟ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
ಪಾಲುದಾರ ಆರ್-ಎಬಿಐಗಳು ಆವಿಷ್ಕಾರ

ವಿಷಯಗಳು

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಬೆಂಬಲಿತ "ಕೃಷಿಕ್" - ಕೃಷಿ ನವೋದ್ಯಮ ಪೋಷಣ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಪರಿಚಯಿಸುವ "ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ".


ಕೃಷಿ ಉದ್ಯಮ ಸಂಬಂಧಿತ ನವೀನ ಯೋಚನೆ, ಯೋಜನೆ, ತಂತ್ರಜ್ಞಾನ, ವಿಚಾರಧಾರೆ ಹೊಂದಿರುವ ಯುವಕ-ಯುವತಿಯರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಪ್ರಗತಿಪರ ರೈತ / ರೈತ ಮಹಿಳೆಯರು ಹಾಗೂ ಆಸಕ್ತರಿಂದ ಕೃಷಿ ನವೋದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವ ಉದ್ಯೋಗಶೀಲತಾ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಪ್ರಸ್ತುತ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯೊಂದಿಗೆ ಕೈಯಾಸರೆ ಒದಗಿಸುವುದು. ಸದರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಭಾವ್ಯನವೋದ್ಯಮಿಗಳಿಗೆ ತಮ್ಮ ಪರಿಕಲ್ಪನೆ / ವಿನೂತನ ತಂತ್ರಜ್ಞಾನ/ ಉತ್ಪನ್ನ/ಕೃಷಿ ಸೇವೆಯನ್ನು ವಾಣಿಜ್ಯ್ಕರಣಗೊಳಿಸಲು ಗರಿಷ್ಟ ರೂ. ೫.೦೦ ಲಕ್ಷದವರೆಗಿನ ಶೇ. ೯೦ ರಷ್ಟು ಅನುದಾನವನ್ನು ಪಡೆಯಲು ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಶಿಫಾರಸ್ಸು ಮಾಡಲಾಗುವುದು.ಉದ್ದೇಶಗಳು

ಅ. ಸಂಭಾವ್ಯ ಕೃಷಿ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿನೂತನ ಕೃಷಿ ನವೋದ್ಯಮ ಆರಂಭಿಸಲು ಪ್ರಾಯೋಗಿಕ, ತಾಂತ್ರಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಒದಗಿಸುವುದು.


ಆ. ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಸಂಭಾವ್ಯ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮೂಲಕ ಉತ್ತೇಜಿಸುವುದು.


ಇ. ಕೃಷಿ ನವೋದ್ಯಮ ಸ್ಥಾಪನೆಗೆ ಪೂರಕವಾಗಿರುವ ನಾವಿನ್ಯಪೂರ್ಣ ಯೋಜನೆ/ತಂತ್ರಜ್ಞಾನ/ವಿಚಾರದಾರೆ ಹೊಂದಿರುವವರಿಗೆ ಆಕರ್ಷಕ ಸ್ವಯಂವೃತ್ತಿ ನೆಲೆ ಒದಗಿಸುವುದು.ಅರ್ಹತಾ ಮಾನದಂಡಗಳು

ಅ. ಕೃಷಿ ಹಾಗೂ ಕೃಷಿ ಪೂರಕ ವಲಯಗಳ ದಕ್ಷತೆ/ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ/ಸೇವೆಯ ಉದ್ಯಮ ನೆಲೆಯಾಧಾರಿತ ಕನಿಷ್ಟ ಒಂದು ವಿನೂತನ ಯೋಜನೆಯನ್ನು ಹೊಂದಿರಬೇಕು.


ಆ. ಅರ್ಜಿದಾರರು ಪೂರ್ಣಾವಧಿ ಕೃಷಿ ಉದ್ಯಮ ಹೊಂದುವ ಆಕಾಂಕ್ಷಿಗಳಾಗಿರಬೇಕು.


ಇ. ಅರ್ಜಿದಾರರು ತಮ್ಮ ನವೀನ/ನಾವಿನ್ಯಪೂರ್ಣ ನವೋದ್ಯಮ ಪರಿಕಲ್ಪನೆಗಳ ಅಭಿವೃಧ್ದಿಗಾಗಿ ಸೂಕ್ತ ಔದ್ಯೋಗಿಕ ಯೋಜನೆ/ಪ್ರಸ್ತಾವನೆ ಹೊಂದಿರಬೇಕು.ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ

ಅ. ಕೃಷಿಕ–ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ ಮೂಲಕ ಆಯ್ಕೆ ಮಾಡಲಾಗುವುದು.


ಆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ನಿಗದಿತ ಅರ್ಜಿ ಸಲ್ಲಿಸಬೇಕು.


ಇ. ಪೂರ್ಣಾವಧಿಗಾಗಿ ಕೃಷಿ ಉದ್ಯಮಗಳನ್ನು ಸ್ಥಾಪಿಸಿ ಮುಂದುವರೆಸಲು ಆಸಕ್ತಿ ಹೊಂದಿರುವ ಹಾಗೂ ವಿನೂತನ ತಂತ್ರಜ್ಞಾನ, ಸೇವಾವಲಯ ಹಾಗೂ ಉದ್ಯಮ ಸ್ಥಾಪಿಸಲು ಉತ್ಸುಕರಾಗಿರುವ ಅಭ್ಯರ್ಥಿಗಳನ್ನು ಕೃವಿವಿಯ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು.


ಈ. ಕೃಷಿ ನವೋದ್ಯಮದ ಕಾರ್ಯಸಾಧ್ಯವಾದ ನವೀನ ಪರಿಕಲ್ಪನೆ ಹೊಂದಿರುವ ೩೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾಥಮಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಯ ಮುಂದೆ ಮಂಡಿಸಲು ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುವುದು.ಅನುದಾನ ಬಿಡುಗಡೆ

ಅ. ಸದರಿ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯಾಗಿರುತ್ತದೆ.


ಆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಪೂರ್ಣಾವಧಿ ಉದ್ಯಮ ಸ್ಥಾಪಿಸಲು ಗರಿಷ್ಟ ₹೫ ಲಕ್ಷದವರೆಗೆ (ಶೇ. ೯೦) ಆರಂಭಿಕ ಅನುದಾನವನ್ನು ಆಯ್ಕೆಯಾದ ನವೋದ್ಯಮಿಗಳಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಮೂಲಕ ನೀಡಲು ಶಿಫಾರಸು ಮಾಡಲಾಗುವುದು.ವಿಸ್ತ್ರತ ಚಟುವಟಿಕೆಗಳು

ಅ. ಆಯ್ಕೆಯಾದ ನವೋದ್ಯಮ ಆಕಾಂಕ್ಷಿಗಳಿಗೆ ೬೦ ಗಂಟೆಗಳ ಆರಂಭಿಕ ತರಬೇತಿಯನ್ನು “ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ, ಕೃ. ವಿ. ವಿ., ಧಾರವಾಡ ವತಿಯಿಂದ ಒದಗಿಸಲಾಗುವುದು.


ಆ. ಸದರಿ ತರಬೇತಿಯೊಂದಿಗೆ ಅಭ್ಯರ್ಥಿಗಳು ತಮ್ಮ ನಾವೀನ್ಯಪೂರ್ಣ ಪರಿಕಲ್ಪನೆ/ತಂತ್ರಜ್ಞಾನ ಇತ್ಯಾದಿಗಳನ್ನು ಪರಿಕ್ಷಿಸಲು/ಪರಿಸ್ಕರಿಸಲು ಸೂಕ್ತ ಅವಕಾಶ ಕಲ್ಪಿಸುವುದು.ಗ್ಯಾಲರಿ

1 / 15

ದೇಶಪಾಂಡೆ ಸ್ಟಾರ್ಟ್ ಅಪ್ಸ್, ಹುಬ್ಬಳ್ಳಿಯಲ್ಲಿ ಎರಡನೇ ಹಂತದ ತರಬೇತುದಾರರು

2 / 15

ಎರಡನೇ ಹಂತದ ತರಬೇತುದಾರರು ತಜ್ಞರೊಂದಿಗೆ, ದೇಶಪಾಂಡೆ ಸ್ಟಾರ್ಟ್ ಅಪ್ಸ್, ಹುಬ್ಬಳ್ಳಿ

3 / 15

ಜ್ಞಾನಾರ್ಜನೆ ಕಾರ್ಯಚಟುವಟಿಕೆಯಲ್ಲಿ ತರಬೇತುದಾರರು, ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿಯಲ್ಲಿ ಪಾಲ್ಗೊಂಡಿದ್ದರು

4 / 15

ಅತ್ತುತ್ಯಮ ನವೋದ್ಯಮ ಪ್ರಶಸ್ತಿಯನ್ನು ಹರೇಶ್ ಪಟೇಲ್ (ಕಿಸಾನ್ ಅಗ್ರಿ ಮಾಲ್) ಇವರಿಗೆ ನೀಡಲಾಯಿತು

5 / 15

ಗೋಗಟೆ ತಂತ್ರಜ್ಞಾನ ಸಂಸ್ಥೆ ಬೆಳಗಾವಿಗೆ ಭೇಟಿ

6 / 15

ಸಾವಯವ ಕೃಷಿ ಸಂಸ್ಥೆ, ಧಾರವಾಡದಲ್ಲಿ ಮೊದಲನೇ ತಂಡದ ನವೋದ್ಯಮಿಗಳು

7 / 15

ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿ

8 / 15

ಸಾವಯವ ಕೃಷಿ ಸಂಸ್ಥೆ, ಧಾರವಾಡ

9 / 15

ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ

10 / 15

ಎಸ್. ಕೆ. ಎಸ್. ಜೆ ಕಲಾ ಹಾಗೂ ಎಸ್. ಎಮ್. ಎಸ್ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಧಾರವಾಡ

11 / 15

ನವೋದ್ಯಮಿಗಳಿಗೆ ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿಯಲ್ಲಿ ತರಬೇತಿ

12 / 15

ಹೆಗಲ್ ಟೆಕ್ನಾಲಾಜಿಸ್ ಪ್ರೈವೇಟ್ ಲಿಮಿಟೆಡ್, ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿಗೆ ಭೇಟಿ

13 / 15

ಎರಡು ದಿನದ ವ್ಯಾಪಾರ ಪೋಷಣಾ ಕಾರ್ಯಾಗಾರ

14 / 15

ಡಾ. ರವಿ ಗುತ್ತಲ ಅವರಿಂದ "ಕೃಷಿಯಲ್ಲಿ ಯಾಂತ್ರೀಕರಣ" ವಿಷಯದ ಕುರಿತು ಉಪನ್ಯಾಸ

15 / 15

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ "ಆಹಾರ ಪೋಷಣೆ ಭದ್ರತೆಗಾಗಿ ಸಿರಿಧಾನ್ಯ ಉತ್ಪನ್ನ" ಗಳ ಕುರಿತು ಡಾ. ಸರೋಜಿನಿ ಜೆ. ಕರಕಣ್ಣವರ ಇವರಿಂದ ಸಂವಾದ