ENGLISH   Admin Login

ಕೃಷಿ ನವೋದ್ಯಮ ಪೋಷಣ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ

ಕೃಷಿಯು ದೇಶದ ಆರ್ಥಿಕತೆಯ ಮುಖ್ಯ ಆಧಾರವಾಗಿದ್ದು ಶೇಕಡಾ ೭೦ ಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆ ಹಾಗು ಶೇಕಡಾ ೫೦ ರಷ್ಟು ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಭಾರತದಲ್ಲಿ ಕೃಷಿ ಉದ್ಯಮಗಳು ಮುನ್ನಡೆ ಸಾಧಿಸಿದರೂ, ಉತ್ತರ- ಕರ್ನಾಟಕದಲ್ಲಿ ಕೃಷಿ ನವೋದ್ಯಮ ಹೆಚ್ಚಿನ ಪ್ರಗತಿ ಕಾಣಬೇಕಾಗಿದೆ. ಈ ಭೂಪ್ರದೇಶವು ಕೃಷಿಗೆ ಮತ್ತು ಕೃಷಿತಂತ್ರಜ್ಞಾನಗಳ ಅಳವಡಿಕೆಗೆ ಪ್ರಕೃತಿದತ್ತವಾಗಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದು ಕೃಷಿತಂತ್ರ ಜ್ಞಾನ ನವೋದ್ಯಮಗಳ ಕೆಲವು ಸಕಾರಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ:


೧. ಗ್ರಾಮೀಣ ಕ್ಷೇತ್ರದಲ್ಲಿ ಖರೀದಿ ಮತ್ತು ಮಾರಾಟವನ್ನು ಪ್ರೋತ್ಸಾಹಿಸುವುದು.


೨. ಸ್ಥಳೀಯವಾಗಿ ಒಪ್ಪಂದದ ಖರೀದಿ ಮತ್ತು ಒಪ್ಪಂದದ ಕೃಷಿ.


೩. ಕೃಷಿ ಉತ್ಪನ್ನಗಳಿಗೆ ನಿರ್ಧಾರಿತ ಮಾರುಕಟ್ಟೆ ಮತ್ತು ಗ್ರಾಮೀಣ ಸಮೃದ್ಧಿಯನ್ನು ಉತ್ತೇಜಿಸುವುದು.


೪. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಜನರ ವಲಸೆ ತಡೆಯುವುದು.


೫. ರೈತರ ಅನಿಶ್ಚಿತತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಮೂಲಕ ಗ್ರಾಮಗಳ ಸಮೃದ್ಧಿಯನ್ನು ಹೆಚ್ಚಿಸುವುದು.

ಉದ್ದೇಶಗಳು

ಅ. ನೂತನ ತಂತ್ರಜ್ಞಾನ / ಆಧಾರಿತ ತಳಿಗಳನ್ನು ಕೃಷಿ ನವೋದ್ಯಮ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದ ಮೂಲಕ "ಪ್ರಯೋಗಾಲಯದಿಂದ ಕೃಷಿ ಭೂಮಿಗೆ" ಧ್ಯೇಯವನ್ನು ಸಾಧಿಸುವುದು.


ಆ. ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ವ್ಯಾಪಾರ ದೃಷ್ಟಿಯನ್ನು ಉತ್ತೇಜಿಸುವುದು.


ಇ. ಗ್ರಾಮೀಣ ಪ್ರದೇಶಗಳ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು.


ಈ. ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಗಳ ವಾಣಿಜ್ಯ್ ಕರಣಕ್ಕಾಗಿ ಸಮಗ್ರ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು.


ಉ. ಆರಂಭಿಕ ಕೃಷಿ-ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ತಾಂತ್ರಿಕ, ಕಾನೂನು, ಹಣಕಾಸು, ಬೌದ್ಧಿಕ ಆಸ್ತಿ ಮತ್ತು ಸಂಬಂಧಿತ ಸೇವೆಗಳನ್ನು ಒಳಗೊಂಡಂತೆ ಮೌಲ್ಯವರ್ಧಿತ ಸೇವೆಗಳನ್ನು ಪ್ರೋತ್ಸಾಹಿಸುವುದು.


ಊ. ಷಿ ನವೋದ್ಯಮ ಕೈಗಾರಿಕೆ ಸ್ಥಾಪಿಸಲು ಹಣಕಾಸು ಸಹಾಯ ಸಂಭಂದಿತ ಸಂಸ್ಥೆಗಳ ಜಾಲವನ್ನು ಅಭಿವೃದ್ಧಿ ಪಡಿಸುವುದು.


ಋ. ಸದ್ಯ ಅಸ್ತಿತ್ವದಲ್ಲಿರುವ ಕೃಷಿ ನವೋದ್ಯಮ ಪೋಷಣ ಕೇಂದ್ರಗಳ ಸಾಮರ್ಥ್ಯವನ್ನು ಬಲಪಡಿಸುವುದು.


ಎ. ಸ್ಥಳೀಯ ಮತ್ತು ಜಾಗತಿಕ ಕೃಷಿ ವ್ಯವಹಾರ ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಪರಿಹಾರವನ್ನು ಒದಗಿಸುವುದು.

ನಮ್ಮ ಪ್ರಗತಿ ಪಕ್ಷಿನೋಟ

೧೧೭ ಕೃಷಿ ನವೋದ್ಯಮ ತರಬೇತಿ

೪೯ ಕೃಷಿ ನವೋದ್ಯಮ ಹಣಕಾಸಿನ ಅನುದಾನ

೧೫೦+ ಉದ್ಯೋಗಗಳ ಸೃಷ್ಟಿ

೪೫+ ಕೃಷಿ ನವೋದ್ಯಮ ಕಾರ್ಯಕ್ರಮಗಳು

ಪ್ರಮುಖ ಕ್ಷೇತ್ರಗಳು

ನಮ್ಮ ನವೋದ್ಯಮಿಗಳುಗ್ಯಾಲರಿ

1 / 20

ಆರ್ . ಕೆ . ವಿ . ವೈ ರಫ್ತಾರ್ ಕಾರ್ಯಕ್ರಮದ ಪ್ರಾರಂಭ ಸಮಾರಂಭ

2 / 20

ಕೃಷಿ ವಿಶ್ವವಿದ್ಯಾಲಯ ಮತ್ತು ದೇಶಪಾಂಡೆ ಸ್ಟಾರ್ಟ್ಅಪ್ಸ್ ನಡುವೆ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು

3 / 20

ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕಬ್ಬಿನ ಸಸಿಗಳ ಉತ್ಪಾದನೆಗಾಗಿ ಬೇಕಾಗುವ ತಂತ್ರಜ್ಞಾನದ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಂಡಿತು

4 / 20

ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ, ಕೃಷಿಕ್-ನವೋದ್ಯಮ ಪೋಷಣಾ ಕೇಂದ್ರ

5 / 20

ಮೊದಲನೇ ಹಂತದ ತರಬೇತಿ ಕಾರ್ಯಾಕ್ರಮದ ಉಧ್ಘಾಟನಾ ಸಮಾರಂಭ

6 / 20

ಎರಡನೇ ಹಂತದ ತರಬೇತಿ ಕಾರ್ಯಾಕ್ರಮದ ಉಧ್ಘಾಟನಾ ಸಮಾರಂಭ

7 / 20

8 / 20

ಮೊದಲನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ

9 / 20

ಮಾನ್ಯ ಕೃಷಿ ಸಚಿವರಾದ ಶ್ರೀ. ಬಿ. ಸಿ. ಪಾಟೀಲ ಅವರಿಂದ "ಕೃಷಿಕ್"- ನವೋದ್ಯಮ ಪೋಷಣಾ ಕೇಂದ್ರದ ಉದ್ಘಾಟನಾ ಸಮಾರಂಭ

10 / 20

ಎರಡನೇ ತಂಡದ ನವೋದ್ಯಮಿಗಳೊಂದಿಗೆ ಒಪ್ಪಂದದ ಒಡಂಬಡಿಕೆಯ ವಿನಿಮಯ

11 / 20

ಐದನೇ ಹಂತದ ತರಬೇತಿ ಕಾರ್ಯಾಕ್ರಮದ ಉಧ್ಘಾಟನಾ ಸಮಾರಂಭ

12 / 20

13 / 20

14 / 20

15 / 20

16 / 20

17 / 20

18 / 20

19 / 20

20 / 20